Tuesday 10 February 2009

ಕನ್ನಡದಾಗೆ ಸ್ವಲ್ಪ ಗರಗಸ.......

ನಮಸ್ಕಾರ , ಅಡ್ಬುದ್ದೆ ಎಲ್ಲರಿಗೂ


ಈ ಬ್ಲಾಗ್ ಶುರು ಮಾಡಿ ಒಂದ್ವರ್ಷ ಆಯಿತು ಆದರು ಇಲ್ಲಿ ತನಕ ಕನ್ನಡದಲ್ಲಿ ಒಂದು ಲೇಖನ ಕೂಡ ಗೀಚ್ಲಿಲ್ಲ ಇವನು ಅಂಥ ನೀವೆಲ್ಲ ಯೋಚನೆ ಮಾಡಿಲ್ವ?. ಏನೋ ಇಷ್ಟು ದಿನ ಆಂಗ್ಲ ಭಾಷೆ ನಾಗೆ ಒಂದಿಷ್ಟು , ಮತ್ತೆ ಹಿಂದಿ ಪಂದಿ ನಾಗೆ ಒಂದ್ ಸ್ವಲ್ಪ ಬರ್ದು ಅದನ್ನ ಓದಿದ ಒಂದಷ್ಟು ಜನರ ತಲೆ ಕೆಡಸಿದ್ದೆ. ಈಗ ಕನ್ನಡದಲ್ಲಿ ನನ್ನ ಸಾಮರ್ಥ್ಯ ಪ್ರದರ್ಶಿಸೋಣ ಅಂಥ ಶುರು ಮಾಡ್ಕೊಂಡಿವ್ನಿ.

ಕನ್ನಡದಲ್ಲಿ ಬರೀಬೇಕು ಅಂಥ ಯೋಚನೆ ಏನು ಇರ್ಲಿಲ್ಲ. ಆದ್ರೆ ಮೊನ್ನೆ ಎನಾಯ್ತಪ್ಪೋ ಅಂದ್ರೆ, ಹಿಂಗೆ ರಸ್ತೆ ನಾಗೆ ಹೋಗ್ತಾ ಇದ್ದೆ. ಎಲ್ಲಿದ್ರೋ ಗೊತ್ತಿಲ್ಲ ನಾಲ್ಕು ಜನ ಬಂದು ಅಟ್ಕಾಯಿಸಿಕೊಂಡ್ರು. ಒಂದು ಮಾತು ಆಡೋದಿಕ್ಕೂ ಬಿಡದೆ ಹಿಗ್ಗಾ ಮುಗ್ಗ ತದ್ಕೊದಿಕ್ಕೆ ಶುರು ಮಾಡ್ಕೊಂಡ್ರು.
ನಾನು ಸ್ವಲ್ಪ ಟೈಮ್ ಪ್ಲೀಸ್ ಅಂಥ ಹೇಳಿ 'ಏನ್ರಪ್ಪ ಇಸ್ಯ, ಯಾಕೆ ಇಂಗೆ ಧರ್ಮದೇಟು?' ಅಂಥ ಇಚಾರ ಮಾಡಿದೆ

ಆ ನಾಲ್ಕು ಜನರಾಗೆ ಇದ್ದ ಒಬ್ಬ ಹೈವಾನ 'ಕರ್ನಾಟಕದಾಗೆ ಹುಟ್ಟಿ, ಇಲ್ಲೇ ಬೆಳೆದು , ಇಲ್ಲಿನ ಕಾರ್ಪೋರೇಶನ್ ನಲ್ಲಿ ನೀರನ್ನ ಕುಡಿದು, ಹಂಗೆ ಇದೆ ನಾಡಿನ ಗಾಳಿ ಉಸಿರಾಡಿ ನೀನು ಇಂಗ್ಲಿಸ್ ನಾಗೆ ಅದೇನೋ ಬ್ಲಾಗ್ ಗೀಚೋದು?' ಅಂಥ ಹೇಳಿ ಇನ್ನೆರಡು ಒದೆ ಕೊಟ್ಟ ಕಣ್ರಪ್ಪೋ .

ಅದಿಕ್ಕೆ ನಾನು 'ಏನೋ ಮನ್ಸಿಗೆ ಬಂದಿದನ್ನ ಹಂಗೆ ಬರಿತೀನಿ. ನಾನು ಬರಿಯೋದನ್ನ ಜಾಸ್ತಿ ಜನ ಓದೋದೂ ಇಲ್ಲ. ಒಂದ್ ನಾಲ್ಕು ಜನ ಸೋಮಾರಿಗಳು ಓದ್ತಾರೆ. ನಾನು ಬರ್ದಿರೋದನ್ನ ಓದಿ ಅವ್ರ ತಲೆ ಕೆಟ್ಟು ಕೆರ ಆಗ್ಬುಟ್ಟಿದೆ ' ಅಂಥ ಹೇಳಿದೆ.

'ಯಾಕೆ ಕನ್ನಡ ದಲ್ಲಿ ಬರಿಯೋಕೆ ಆಗೊಲ್ವ. ಇಲ್ಲಿ ಸೋಮಾರಿಗಳಿಲ್ವ?. ಅದ್ಯಾಕೆ ತಾರತಮ್ಯ, ಕನ್ನಡದೋರು ಕೂಡ ನೀನು ಗೀಚಿರೋದನ್ನ ಓದಿ ಮೆಂಟಲಾಗ್ಲಿ . ಜೈ ಕನ್ನಡಾಂಬೆ' ಅಂಥ ಒಂದೇ ಉಸಿರಿನಾಗೆ ಒದರಿ ನನ್ ತಲೆ ಮೇಲೆ ಒಂದ್ ಮೊಟಕಿದ.

ಸಾಕಪ್ಪೋ ಇವ್ರ ಸಹವಾಸ ಅಂಥ ನಾನು 'ಸರಿ ಕಣ್ರಪ್ಪೋ, ನಿಮ್ಮ ಇಷ್ಟದಂತೆ ಆಗ್ಲಿ. ಇನ್ಮುಂದೆ ಕನ್ನಡದಲ್ಲೂ ನನ್ನ ಲೇಖನ ಪ್ರವಾಹ ಹರಿದು ಬರುತ್ತೆ. ಕನ್ನಡಿಗರಿಗೂ ನನ್ನ ಬರವಣಿಗೆ ಓದುವ ಕೆಟ್ಟ ಕಾಲ ಬಂತು.ಅದ್ಸರಿ ಇಷ್ಟೆಲ್ಲಾ ಒದೆ ಕೊಟ್ರಲ್ಲ ನೀವೆಲ್ಲ ಯಾರ್ ಕಣ್ರಪ್ಪೋ?'

'ನಾವು ಕನ್ನಡದ ಉಟ್ಟು ಓರಾಟಗಾರರು, ಕನ್ನಡ ನಾಡಿಗಾಗಿ ಹೇನನ್ನು ಮಾಡೋದಿಕ್ಕೆ ಸಿದ್ದರಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯವರು. ನಿನ್ನ ಅವಾಗಾವಾಗ ಹಿಂಗೆ ವಿಚಾರಿಸಿಕೊಂಡು ಹೋಗ್ತಿವಿ ' ಅಂಥ ಹೇಳಿ ಯಾವ್ದೋ ತಮಿಳು ಸಿನಿಮಾ ಚೆನ್ನಾಗೈತೆ ಅಂಥ ಆಟೋ ಹತ್ಕೊಂಡು ಸಿನಿಮಾ ಟೆಂಟ್ ಕಡೆ ಹೊರಟೋದ್ರು .

ನಾನು ಹಂಗೆ ಮೈ ಕೈ ಮುಟ್ನೋಡ್ಕೊಂಡು ಮನೀ ಕಡಿಗೆ ಹೆಜ್ಜೆ ಹಾಕಿದೆ.

PS: For those who are Kannada challenged. This is just an attempt to pollute my mother tongue with my usual gibberish. Be happy that you people are spared this time. But I'll be back....

2 comments:

Pradeep said...

i dont know to comment with kannda font!!! anyways...
pasandhaagaithe!!!

Ravi Kiran said...

thanksuu..... :)